ವಕೀಲ ಎನ್ನುವ ಭಯ ಹಾಗೂ ಗೌರವ ಇಲ್ಲದೆ ಕಕ್ಷಿದಾರನ ಎದುರು ಪಾರ್ಟಿ ಪಾವಗಡದ ವಕೀಲ ಸುಧಾಕರ್ ಮೇಲೆ ಹಲ್ಲೆ ನಡೆಸಿರುವುದು ವಕೀಲರ ಸಂಘದ ಜಿಲ್ಲಾಧ್ಯಕ್ಷ ಕೆಂಪರಾಜಯ್ಯ ತೀವ್ರವಾಗಿ ಖಂಡಿಸಿದರು. ತುಮಕೂರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾ ವಕೀಲರ ಸಂಘದಿಂದ ವಕೀಲ ಸುಧಾಕರ್ ಮೇಲೆ ಹಲ್ಲೆ ವಿರೋಧಿಸಿ ಸೋಮವಾರ ಮಧ್ಯಾಹ್ನ 1.10 ರ ಸಮಯದಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಅವರು ಮಾತನಾಡಿದರು. ವಕೀಲರ ರಕ್ಷಣಾ ಕಾಯ್ದೆ ಇದ್ದರು ಸಹ ಆತ ವಯಕ್ತಿಕ ಜಿದ್ದು ಇಟ್ಟುಕೊಂಡು ವಕೀಲ ಸುಧಾಕರ್ ಮೇಲಿನ ಹಲ್ಲೆಯನ್ನ ಸಹಿಸುವುದಿಲ್ಲ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಸರ್ಕಾರದ ವಿರುದ್ದ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.