ಹಾಸನ :ಹಿಂದೆ ಆಡಿದಂತೆ ಇತ್ತೀಚೆಗೂ ರಾಗಿ ಕಳ್ಳ, ಮನೆಕಳ್ಳ ಅಂತೆಲ್ಲ ಫೇಸ್‌ಬುಕ್ ಜಾಲತಾಣದಲ್ಲಿ ಅಪ ಪ್ರಚಾರ ಮಾಡುತ್ತಿದ್ದಾನೆ. ಇವನಿಗೆ ಮಾನ ಮರ್ಯಾದೆ ಇದೆಯಾ, ಹಿಂದೆ ಇದೇ ಆರೋಪ ಮಾಡಿದ್ದ. ಧರ್ಮಸ್ಥಳಕ್ಕೆ ಬಂದು ಆಣೆ ಮಾಡು ಎಂದು ಕರೆದಿದ್ದಕ್ಕೆ ಬರಲಿಲ್ಲ, ನಾನು ಹೋಗಿ ಬಂದೆ, ಇವನಿಗೆ ಆತ್ಮಗೌರವ ಇದೆಯಾ, ಇನ್ನು ಸುಮ್ಮನೆ ಕೂರಲು ಆಗಲ್ಲ, ಸುಳ್ಳು ಆರೋಪ ಸಹಿಸಲು ಆಗಲ್ಲ, ಸೋಮವಾರವೇ ಮಾನನಷ್ಟ ಮೊಕದ್ದಮೆ ಹೂಡುವೆ ಎಂದರು. ಯಾರನ್ನ ಹೇಗೆ ಬೇಕಾದ್ರೂ ಮಾತಾಡಬಹುದಾ, ಆತ ಆಡಿರುವುದನ್ನು ಸಾಬೀತು ಮಾಡಬೇಕು, ಇಲ್ಲ ಗೌರವದಿಂದ ಇರಬೇಕು ಎಂದು ಎಚ್ಚರಿಸಿದರು.