ಪಡಿತರ ಅಕ್ಕಿ ಅಕ್ರಮವಾಗಿ ದಾಸ್ತಾನು ಇಟ್ಟಿದ್ದ ಗೋಡೌನ್ ಮೇಲೆ ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಅಂದಾಜು 7 ಟನ್ ಅಕ್ಕಿ ಮತ್ತು ರಾಗಿ ವಶಕ್ಕೆ ಪಡೆದ ಘಟನೆ ಪಟ್ಟಣದ ಹೊಸೂರು ರಸ್ತೆಯಲ್ಲಿ ನಡೆದಿದೆ. ಮ ಏಜಸ್, ಅನಿಸ್, ರಾಮು ಆರೋಪಿಗಳಾಗಿದ್ದು, ಮೂವರು ಪಟ್ಟಣದ ಹೊಸೂರು ರಸ್ತೆಯಲ್ಲಿ ಗೋಡೌನ್ ವೊಂದನ್ನು ಬಾಡಿಗೆ ಪಡೆದು ಎರಡು ರೂಂಗಳಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಶೇಖರಣೆ ಮಾಡಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ 142 ಮೂಟೆ ಪಡಿತರ ಅಕ್ಕಿ ಮತ್ತು 10 ಮೂಟೆ ರಾಗಿ ಇರುವುದು ಕಂಡು ಬಂದಿದೆ. ಒಟ್ಟು 152 ಮೂಟೆಗಳನ್ನು ಕೂಡಲೇ ವಶಕ್ಕೆ ಪಡೆದಿದ್ದಾರೆ.