*ಅನುಭವ ಮಂಟಪ ಬದುಕು ಬದಲಾಯಿಸುವ ಕ್ರಾಂತಿಕಾರಿ ಸ್ಥಳವಾಗಲಿದೆ:ಬಸವರಾಜ ಬೊಮ್ಮಾಯಿ* *ಕೇಂದ್ರ ರಾಜ್ಯ ಸರ್ಕಾರಗಳು ಅನುಭವ ಮಂಟಪಕ್ಕೆ ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಸೆಳೆಯಲು ಕ್ರಮ ಕೈಗೊಳ್ಳಬೇಕು:ಬಸವರಾಜ ಬೊಮ್ಮಾಯಿ* ಬೀದರ:(ಬಸವಕಲ್ಯಾಣ) ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ಅನುಭವ ಮಂಟಪ ಬದುಕನ್ನು ಬದಲಾವಣೆ ಮಾಡುವಂತಹ ಕಾಂತಿಕಾರಿ ಸ್ಥಳವಾಗಲಿದ್ದು ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿಗರನ್ನು ಸೆಳೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.