ಧರ್ಮಯಾತ್ರೆಗೆ ಬೆಂಬಲ ಸೂಚಿಸಿ ಮಾತನಾಡಿದ ಸಂಸದ ಶ್ರೇಯಸ್ ಪಟೇಲ್,ಗೋಪಾಲಣ್ಣ ಅವರ ನೇತೃತ್ವದಲ್ಲಿ ಹೊರಟಿರುವ ಯಾತ್ರೆಗೆ ಶುಭಕೋರುವೆ. ಹಿಂದೂ ಧರ್ಮ ಹಾಗೂ ನಮ್ಮ ನಮ್ಮ ಧರ್ಮ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಧರ್ಮಸ್ಥಳ, ಡಾ.ವೀರೇಂದ್ರ ಹೆಗ್ಗಡೆಯವರು ಸಮಾಜದ ಏಳಿಗೆಗೆ ಹಾಗೂ ಧರ್ಮ ಉಳಿಸಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅವರ ಹಲವು ರೀತಿಯ ಕೊಡುಗೆ ಪ್ರಶಂಸನೀಯ, ಹಾಗಾಗಿ ಧರ್ಮ ಉಳಿಯಬೇಕು. ನಾವೆಲ್ಲರೂ ಸದಾ ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ಅವರ ಜೊತೆ ಇರುತ್ತೇವೆ ಎಂದು ಹೇಳಿದರು. ಇದೇ ರೀತಿ ಎಲ್ಲ ತಾಲೂಕುಗಳಿಂದ ಸಂಘಟನೆಯಾಗಿ ವೀರೇಂದ್ರ ಹೆಗ್ಗಡೆ ಅವರಿಗೆ ಕೈಜೋಡಿಸಬೇಕು