ವೈದ್ಯಕೀಯ ಸೇವೆಯಲ್ಲಿ ಸಿಗುವ ಆತ್ಮತೃಪ್ತಿ ಬೇರೆಲ್ಲೂ ಸಿಗುವುದಿಲ್ಲ ಎಂದು ಕರ್ನಾಟಕ ಉಚ್ಚನ್ಯಾಯಾಲಯದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎಸ್.ಎ.ಅಹಮದ್ ಹೇಳಿದರು. ನಗರದ ಸಿಮ್ಸ್ ನ ಅರೆ ವೈದ್ಯಕೀಯ ವಿಭಾಗದ ವಾರ್ಷಿಕೋತ್ಸವ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿ, ಸೇವೆ ಕೊಟ್ಟ ಬಳಿಕ ಸಿಗುವ ಸಂತೋಷ ಜಗತ್ತಿನಲ್ಲಿ ಎಲ್ಲೂ ಸಿಗುವುದಿಲ್ಲ ಎಂದರು. ಅರೆ ವೈದ್ಯಕೀಯ ಶಿಕ್ಷಣ ವ್ಯಾಸಂಗ ಮಾಡಿ ಸಮಾಜದ ಸೇವೆ ಮಾಡಲು ಹೋಗುತ್ತಿರುವ ನೀವೆಲ್ಲರೂ ಉತ್ತಮ ಸೇವೆ ಸಲ್ಲಿಸಬೇಕು. ತಂದೆಗೆ ಹೃಯದಘಾತವಾದಾಗ ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿಸಿದ ಸಂದರ್ಭದಲ್ಲಿ 6 ತಿಂಗಳ ಕಾಲ ಐಸಿಯುನಲ್ಲಿದ್ದರು ಎಂದು ತಂದೆ ನೆನೆದು ಭಾವುಕರಾದರು.