ಗ್ರೇಟರ್ ಬೆಂಗಳೂರು ಅಥಾರಿಟಿಯಾಗಿ ಬಿಬಿಎಂಪಿ ವಿಂಗಡಣೆ ಆದ ಮೇಲೆ ಐದು ಬಿಬಿಎಂಪಿ ಆಗಲಿದೆ. ಐದು ವಿಭಾಗಗಳಾದ ಮೇಲೆ ವಾರ್ಡ್ ಸಂಖ್ಯೆ ಕೂಡ ಜಾಸ್ತಿ ಆಗುತ್ತೆ ಅಂತ ಚರ್ಚೆ ಆಗ್ತಿದೆ. ಸದ್ಯ ಹಾಲಿ ಇರುವ 198 ವಾರ್ಡ್ 450 ವಾರ್ಡ್ ಆಗಿ ಬದಲಾವಣೆ ಆಗಿದೆ ಅನ್ನುವಂತಹ ಮಾಹಿತಿ ಇದೆ. ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಬಿಬಿಎಂಪಿ ಕಮಿಷನರ್ ಮಹೇಶ್ವರ ರಾವ್ ಸ್ಪಷ್ಟನೆ ಕೊಟ್ಟಿದ್ದು ಇದೆಲ್ಲ ಸತ್ಯಕ್ಕೆ ದೂರವಾದ ವಿಚಾರ ಎಂದಿದ್ದಾರೆ. ವಾರ್ಡ್ ವಿಂಗಡಣೆ ಬಗ್ಗೆ ಸರ್ಕಾರ ಆಯೋಗ ರಚನೆ ಮಾಡುತ್ತದೆ. ಆಯೋಗದ ವರದಿಯ ಆಧಾರದ ಮೇಲೆ ವಿಂಗಡಣೆ ಆಗುತ್ತೆ ಅಲ್ಲಿಯವರೆಗೂ ಹಾಲಿ ಇರುವ 198 ವಾರ್ಡ್ ಮುಂದುವರೆಯುತ್ತೆ ಎಂದಿದ್ದಾರೆ