ಚಾಮರಾಜನಗರದ ದೊಡ್ಡ ಗಣಪತಿ, ಪೊಲೀಸ್ ಗಣಪತಿ, ಆರ್ ಎಸ್ ಎಸ್ ಗಣಪತಿ ಎಂಥಲೇ ಕರೆಯುವ ಶ್ರೀ ವಿದ್ಯಾ ಗಣಪತಿ ಮಂಡಳಿಯ ಗಣಪತಿಯನ್ನು ರಥದ ಬೀದಿಯಲ್ಲಿ ಪ್ರತಿಷ್ಟಾಪನೆ ಮಾಡಲಾಗಿದೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಶತೃಗಳ ಎದೆ ನಡುಗಿಸಿದ್ದ ಬ್ರಹೋಸ್ ಕ್ಷಿಪಣಿ ಮಾದರಿ ಬ್ರಹ್ಮೋಸ್ ಗಣಪತಿಯನ್ನು ಪ್ರತಿಷ್ಟಾಪನೆ ಮಾಡಲಾಗುತ್ತಿದೆ. ರಥದ ಬೀದಿಯಲ್ಲಿರುವ ಗಣಪತಿ ಪ್ರತಿಷ್ಟಾಪನೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಟಿ ಕವಿತಾ ಭೇಟಿ ನೀಡಿ ನಮಿಸಿದರು. ಈ ವೇಳೆ, ಗಣಪತಿ ಮಂಡಳಿ ಅಧ್ಯಕ್ಷ ಶಿವಣ್ಣ ,ಉಪಾಧ್ಯಕ್ಷ ವಿರಾಟ್ ಶಿವು, ನಗರಸಭೆ ಅಧ್ಯಕ್ಷ ಸುರೇಶ್ ಸೇರಿ ಮುಖಂಡರು ಇದ್ದರು.