ಹಲಗೂರಿನ ಬಿ.ಕೆ.ಕಾಂಪ್ಲೆಕ್ಸ್ನಲ್ಲಿ ಆಯೋಜಿಸಿದ್ದ ಹಲಗೂರು ಜನಶ್ರೇಯೋಭಿವೃದ್ದಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಜರುಗಿತು. ಸಭೆಯ ಅಧ್ಯಕ್ಷತೆ ವಹಿಸಿ ಸಂಘದ ಅಧ್ಯಕ್ಷರಾದ ಎಚ್.ವಿ. ಅಶ್ವಿನ್ ಕುಮಾರ್ ಅವರು ಮಾತನಾಡಿ, ಸಹಕಾರ ಸಂಘಗಳು ಅಭಿವೃದ್ಧಿ ಆಗಬೇಕಾದರೆ ಸದಸ್ಯರು ತಮ್ಮ ನೆಂಟರ ಸ್ನೇಹಿತರ ಹತ್ತಿರ ಇರುವ ಹಣವನ್ನು ಫಿಕ್ಸೆಡ್ ಡೆಪಾಸಿಟ್ ಮಾಡಿಸುವುದರ ಮುಖಾಂತರ ಸಹಕಾರ ನೀಡಿದರೆ ನಮ್ಮ ಜನಶ್ರೇಯೋಭಿವೃದ್ಧಿ ಸಂಘವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸಾಧ್ಯವಾಗುತ್ತದೆ ತಿಳಿಸಿದರು. 2024 25 ನೇ ಸಾಲಿನಲ್ಲಿ ನಮ್ಮ ಸಂಘಕ್ಕೆ 15 ಲಕ್ಷದ 663ರೂ ನಿವ್ವಳ ಲಾಭ ಬಂದಿದ್ದು, ಕಳೆದ ಎಂಟು ವರ್ಷಗಳ ಹಿಂದೆ ಆರಂಭವಾದ ಜನಶ್ರೇಯೋಭಿವೃದ್ದಿ ಸಹಕಾರ ಸಂಘದಲ್ಲಿ ಅಂದಿನಿಂದ