ಕೊಳ್ಳೇಗಾಲ: ಚಾಮರಾಜನಗರ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ನಾಗರಿಕ ಬಂದೂಕು ತರಬೇತಿ ಶಿಬಿರವ ನ್ನು ಕೊಳ್ಳೇಗಾಲ ಪಟ್ಟಣದ ಶ್ರೀ ಮಹದೇಶ್ವರ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಈ ಶಿಬಿರಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಅವರು ಚಾಲನೆ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಎಸ್‌ಪಿ, ನಾಗರಿಕರಿಗೆ ಸ್ವಯಂ ರಕ್ಷಣೆಯ ಅರಿವು ಮತ್ತು ಕಾನೂನುಬದ್ಧವಾದ ಬಂದೂಕು ಬಳಕೆ ಕುರಿತು ತಿಳುವಳಿಕೆ ನೀಡುವ ಉದ್ದೇಶದಿಂದ ಈ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ,ಎಂದರು. ಇಂತಹ ತರಬೇತಿಗಳ ಮೂಲಕ ಸಾರ್ವಜನಿಕರಲ್ಲಿ ಭದ್ರತಾ ಅರಿವು ಹೆಚ್ಚುವುದು ಮತ್ತು ಅತ್ಯಾವಶ್ಯಕ ಸಮಯದಲ್ಲಿ ಬಂದೂಕು ಬಳಸುವುದರಿಂದ ಪ್ರಾಯೋಗಿಕ ತಿಳುವಳಿಕೆಯನ್ನು ನೀಡುವುದು ಈ ಶಿಬಿರದ ಉದ್ದೇಶ ಎಂದರು