ಮಹಾಲಕ್ಷ್ಮಿ ಲೇಔಟ್ ಜೈ ಮಾರುತಿ ನಗರದ ನ್ಯಾಯಬೆಲೆ ಅಂಗಡಿಯಲ್ಲಿ ಹೊರ ಜಿಲ್ಲೆಯ ಪಡಿತರರಿಗೆ ರೇಷನ್ ನೀಡುತ್ತಿಲ್ಲ ಎಂಬ ದೂರಿನ ಮೇರೆಗೆ ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರೊಗೆ ಅಂಗಡಿಗೆ ಖುದ್ದಾಗಿ ಶಾಸಕ ಗೋಪಾಲಯ್ಯ ಅವರು ಭೇಟಿ ನೀಡಿ, ಮುಚ್ಚಿದ ಬಾಗಿಲನ್ನು ತೆರೆಸಿ, ರೇಷನ್ ನೀಡುವಂತೆ ಮಾಲೀಕನನ್ನು ತರಾಟೆಗೆ ತೆಗೆದುಕೊಂಡರು. ಆ ನಂತರ ಪಡಿತರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪಡಿತರರನ್ನು ಉದ್ದೇಶಿಸಿ ಮಾತನಾಡಿ, ನಿಮ್ಮಗಳ ಪರವಾಗಿ ನಾನು ವಿಧಾನಸಭೆಯಲ್ಲಿ ಧ್ವನಿ ಎತ್ತಿದ್ದೇನೆ. ಹೊರ ರಾಜ್ಯದಿಂದ ಕೂಲಿ ಕೆಲಸಗಳಿಗಾಗಿ ವಲಸೆ ಬಂದಿರುವ ಕಾರ್ಮಿಕರುಗಳಿಗೆ ಅವರು ವಾಸಿಸುವ ಸ್ಥಳದಲ್ಲೇ ರೇಷನ್ ವಿತರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದೇನೆ. ಅಂಗಡಿಗಳಲ್ಲಿ ರೇಷನ್ ನೀಡದೆ ಹೋದರೆ ಶಾಸಕರಾದ ಗೋಪಾಲಯ್ಯ ಅವರೇ ಕಳಿಸಿದ್ದ