ಬಾಗಲಕೋಟೆ ಜಿಲ್ಲಾಧಿಕಾರಿ ಸಂಗಪ್ಪ ಅವರು ಹುನಗುಂದ ತಹಶೀಲದಾರ ಕಾರ್ಯಾಲಯಕ್ಕೆ ಭೇಟಿ ನೀಡಿ, ಕಚೇರಿಯ ಸಿಬ್ಭಂಧಿಗಳ ಕಾರ್ಯವೈಖರಿಯನ್ನು ಪರಿಶೀಲಿಸಿ, ತಮ್ಮ ಸಂಕಲನಕ್ಕೆ ಸಂಬಂಧಿಸಿದಂತೆ ಸ್ವೀಕೃತಿಯಾಗಿರುವ ಅರ್ಜಿಗಳು ಸಕಾಲದಲ್ಲಿ ವಿಲೇವಾರಿ ಮಾಡುವಂತೆ ಸಿಬ್ಬಂಧಿಗಳಿಗೆ ನಿರ್ದೇಶಿಸಿದರು. ನಂತರ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಕಛೇರಿಗೆ ಬೇಟಿ ನೀಡುವ ಸಾರ್ವಜನಿಕರೊಡನೆ ಸೌಜನ್ಯಯುತವಾಗಿ ವರ್ತಿಸಿ, ಅವರ ಸಮಸ್ಯೆಗಳನ್ನು ಆಲಿಸಿ, ನಿಯಮಾನುಸಾರ ಕ್ರಮವಹಿಸುವಂತೆ ಗ್ರೇಡ್-೨ ತಹಶೀಲದಾರರಿಗೆ ಸೂಚಿಸಿದರು. ತಹಶೀಲದಾರ ಕಚೇರಿಯ ಅಭಿಲೇಖಾಲಯವನ್ನು ಬೇಟಿ ನೀಡಿ, ಭೂ ಸುರಕ್ಷಾ ಯೋಜನೆಯ ಪ್ರಗತಿಯನ್ನು ಪರಿಶೀಲಿಸಿದರು.