ಅಪರಿಚಿತ ವಾಹನ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ದುಬಲಗುಂಡಿ ಕ್ರಾಸ್ ಬಳಿ ಶನಿವಾರ ರಾತ್ರಿ 8ಗಂಟೆ ಅಸುಪಾಸು ಸಂಭವಿಸಿದೆ. ಮೃತ ವ್ಯಕ್ತಿಯನ್ನು ಸದ್ಯ ಬೀದರ್ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನೆಲೆಸಿರುವ ಕಲ್ಬುರ್ಗಿ ಜಿಲ್ಲೆ ಕಾಳಗಿ ತಾಲೂಕು ರಟಕಲ್ ಗ್ರಾಮದ ನಿವಾಸಿ ಸಿದ್ದಣ್ಣ ಗುರುನಾಥ ಸರಡಗಿ (55) ಎಂದು ತಿಳಿದುಬಂದಿದೆ. ಘಟನೆ ಕುರಿತು ಹುಮ್ನಾಬಾದ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.