ನಗರದ ಗಾಂಧಿ ವೃತದಲ್ಲಿ ವಿದ್ಯುತ್ ಕಂಬದ ದುರಸ್ಥಿ ಕಾರ್ಯ ನಡೆದಿತ್ತು. ಈ ಹಿನ್ನಲೆಯಲ್ಲಿ ಟ್ರಾಫಿಕ್ ಜಾಮ್ ನಿಂದಾಗಿ ವಾಹನ ಸವಾರರು ಕೆಲ ಹೊತ್ತು ತೊಂದರೆ ಅನುಭವಿಸುವಂತಾಯಿತು. ರಾತ್ರಿ ವೇಳೆಯಲ್ಲಿ ಇಂತಹ ಪ್ರಮುಖ ರಸ್ತೆಯಲ್ಲಿನ ಕೆಲಸ ಕಾರ್ಯವನ್ನು ಕೈಗೊಳ್ಳಬೇಕು. ಆಗ ವಾಹನ ದಟ್ಟಣೆ ಇರುವುದಿಲ್ಲ. ಆದರೆ, ಹಗಲು ಹೊತ್ತಿನಲ್ಲಿ ದುರಸ್ಥಿ ಮಾಡಿದರೆ ವಾಹನ ಸವಾರರಿಗೆ ತೊಂದರೆ ಆಗುತ್ತದೆ ಅಂತ ಹೆಸ್ಕಾಂ ಅಧಿಕಾರಿಗಳ ವಿರುದ್ಧ ಸವಾರರು ಆಕ್ರೋಶ ವ್ಯಕ್ತಪಡಿಸಿದರು.