ನೇಪಾಳದಲ್ಲಿ ಕನ್ನಡಿಗರು ಸಿಲುಕಿರುವ ವಿಚಾರವಾಗಿ ನಗರದ ಹೊರವಲಯದಲ್ಲಿರುವ ಖಾಸಗಿಕಲ್ಯಾಣ ಮಂಟಪದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಬುಧುವಾರ ಪ್ರತಿಕ್ರಿಯಿಸಿ,ನನ್ನನ್ನ ಒಬ್ಬರು ಸಂಪರ್ಕ ಮಾಡಿದ್ರು, ಅವರಿಗೆ ನಾನು ಮಾತನಾಡಿದ್ದೇನೆ,ಒಂದೆರಡು ದಿನದಲ್ಲಿ ವಾತಾವರಣ ತಿಳಿಯಾಗುತ್ತೆ, ಯಾರು ಎಲ್ಲಿದ್ದಾರೊ ಅಲ್ಲೆ ಜಾಗೃತರಾಗಿರಿ,ಅಲ್ಲಿನ ಸರ್ಕಾರದ ಸೂಚನೆಗಳನ್ನು ಪಾಲಿಸಿ, ಜಾಗೃತರಾಗಿರಲಿ ರಾಜ್ಯ ಸರ್ಕಾರ ಸೂಚಿಸಿದರೆ ನಾನು ಅಲ್ಲಿಗೆ ಹೋಗಲು ಸಿದ್ದನಿದ್ದೇನೆ,ಸದ್ಯಕ್ಕೆ ಅಲ್ಲಿನ ವಾತಾವರಣ ಬಹಳ ಭೀತಿ ಹುಟ್ಟಿಸುವಂತಿದೆ,ಇದು ರೆಸ್ಕ್ಯೂ ಕಾರ್ಯಾಚರಣೆ ಅಲ್ಲ, ದೇಶದ ಒಳಗಡೆ ಉಂಟಾಗಿರೊ ಆಂತರಿಕ ಗಲಭೆ,ಅಲ್ಲಿನ ಸಮಸ್ಯೆ ತಿಳಿಯಾಗೊ ವರೆಗೂ ನಾವೂ ಕಾಯಲೇಬೇಕೆಂದರು.