ಕಳ್ಳತನ ಮಾಡಲು ಪಿಜಿಗೆ ನುಗ್ಗಿದ ಕಳ್ಳನೋರ್ವ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಆಗಸ್ಟ್ 29ರ ನಸುಕಿನ ಜಾವ 3:30ರ ಸುಮಾರಿಗೆ ಸುದ್ದಗುಂಟೆಪಾಳ್ಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.ಕಳ್ಳತನಕ್ಕೆಂದು ನುಗ್ಗಿದ್ದ ಆರೋಪಿ ಬೆಡ್ ಮೇಲೆ ಮಲಗಿದ್ದ ಯುವತಿಯನ್ನ ಅಸಭ್ಯವಾಗಿ ಸ್ಪರ್ಶಿಸಲಾರಂಭಿಸಿದ್ದಾನೆ.ಯುವತಿ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಆಕೆಯನ್ನ ಬೆದರಿಸಿ ರೂಮಿನಲ್ಲಿದ್ದ 2500 ರೂ ಹಣ ಕಳ್ಳತನ ಮಾಡಿ ಎಸ್ಕೇಪ್ ಆಗಲು ತಲಯತ್ನಿಸಿದ್ದಾನೆ.ನೊಂದ ಯುವತಿ ಆರೋಪಿಯನ್ನ ಬೆನ್ನಟ್ಟಲು ಯತ್ನಿಸಿರುವ ದೃಶ್ಯಗಳು ಸಿಸಿವಿಯಲ್ಲಿ ಸೆರೆಯಾಗಿವೆ.ಘಟನೆ ಸಂಬಂಧ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ