ಲಕ್ಷ್ಮೇಶ್ವರ ತಾಲ್ಲೂಕಿನ ಹಿರೇಮಲ್ಲಾಪೂರ ಗ್ರಾಮದಲ್ಲಿ ಅಲ್ಪೆನ್ ಎಥೆನಾಲ್ ಕಂಪನಿ ರೈತರಿಗೆ ಮೋಸ ಮಾಡಿದೆ. ವ್ಯವಸಾಯ ಮಾಡುವುದಾಗಿ ರೈತರ ಜಮೀನು ಖರಿಧಿಸಿ ಈಗ ಎಥೆನಾಲ್ ಕಂಪನಿ ಸ್ಥಾಪಿಸುವುದಾಗಿ ಹೇಳಿದ್ದಾರೆ. ಇದರಿಂದ ರೈತರು ಆತಂಕದಲ್ಲಿದ್ದಾರೆ. ಸೂರಣಗಿ, ಹರದಗಟ್ಟಿ, ಅಮರಾಪೂರ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಾವಿರಾರು ಕುಟುಂಬಗಳು ವಾಸ ಮಾಡುತ್ತಿವೆ. ಎಥೆನಾಲ್ ಕಂಪನಿಯ ತ್ಯಾಜ್ಯದಿಂದ ಈ ಎಲ್ಲ ಗ್ರಾಮಗಳ ಜನರಿಗೆ ತೊಂದರೆ ಆಗುವ ಸಾಧ್ಯದೆ ಇದೆ. ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳು ಮದ್ಯಸ್ಥಿಕೆ ವಹಿಸಿ ಗ್ರಾಮಸ್ಥರ ಹಿತ ಕಾಪಾಡಬೇಕು ಅಂತ ಜಯ ಕರ್ನಾಟಕ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ್ ಚೌವ್ಹಾಣ್ ಆಗ್ರಹಿಸಿದರು.