ಮಳವಳ್ಳಿ : ತಾಲ್ಲೂಕಿನ ಶಿವನಸಮುದ್ರದ ಬಳಿ ಶನಿವಾರ ಹಾಗೂ ಭಾನುವಾರದಂದು ಏರ್ಪಾಡಾಗಿರುವ ಗಗನಚುಕ್ಕಿ ಜಲಪಾತೋತ್ಸವದ ಬೃಹತ್ ಸಮಾರಂಭಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದ್ದು ಮಳವಳ್ಳಿ ತಾಲ್ಲೂಕು ಸೇರಿದಂತೆ ನಾಡಿನ ಜನತೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾ ವೈಭವದ ರಸದೌತಣವನ್ನು ಸವಿಯಬೇ ಕೆಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಆದ ಶಾಸಕ ಪಿ ಎಂ ನರೇಂದ್ರ ಸ್ವಾಮಿ ಮನವಿ ಮಾಡಿದ್ದಾರೆ. ಶಿವನಸಮುದ್ರದಲ್ಲಿನ ಸಮಾರಂಭ ದ ವೇದಿಕೆ ಆವರಣದಲ್ಲಿ ಶುಕ್ರ ವಾರ ಸಾಯಂಕಾಲ 6ಗಂಟೆ ಸಮಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಇಷ್ಟು ವರ್ಷ ಜಲಪಾತದ ಆವರಣದಲ್ಲೇ ನಡೆಯುತ್ತಿದ್ದ ಸಮಾರಂಭವನ್ನು ರಸ್ತೆ ಸಮಸ್ಯೆಯಿಂದ ಈ ಬಾರಿ ಗ್ರಾಮದ ಪ್ರವೇಶ ದ್ವಾರದಲ್ಲೇ ಆಯೋಜಿಸಲಾಗಿದೆ ಎಂದರು.