ನಗರದಲ್ಲಿ ವಿಜಯದಶಮಿ ಉತ್ಸವದ ಅಂಗವಾಗಿ ಗುರುವಾರ ರಾತ್ರಿ ಬಾಲಾಜಿ ಮಂದಿರ ದೇವಸ್ಥಾನ ಸಮಿತಿ ವತಿಯಿಂದ 11:51ಕ್ಕೆ ರಾಮಲೀಲಾ ಪ್ರದರ್ಶನ ಜೊತೆಗೆ ರಾವಣ ಪ್ರತಿಕೃತಿ ದಹನ ವೀಕ್ಷಣೆಗೆ ಸಹಸ್ರಾರು ಸಂಖ್ಯೆಯ ಜನರು ಸಾಕ್ಷಿಯಾದರು. ಶಾಸಕ ಡಾ. ಸಿದ್ದು ಪಾಟೀಲ್, ಮಾಜಿ ಸಚಿವ ರಾಜಶೇಖರ್ ಪಾಟೀಲ್, ಎಂಎಲ್‌ಸಿಗಳ ಚಂದ್ರಶೇಖರ್ ಪಾಟೀಲ್, ಭೀಮರಾವ್ ಪಾಟೀಲ್ ಸೇರಿದಂತೆ ಅನೇಕ ಜನ ಗಣ್ಯರು ಮತ್ತು ರಾಮಲೀಲಾ ತಂಡದ ಪ್ರಮುಖರಿದ್ದರು.