ಡಿಸಿಸಿ ಬ್ಯಾಂಕ್ ನ 14 ನಿರ್ದೇಶಕರ ಪೈಕಿ ಉಳಿದ 6 ನಿರ್ದೇಶಕರ ಸ್ಥಾನಗಳಿಗೆ ತುಮಕೂರು ನಗರದಲ್ಲಿ ಚುನಾವಣೆ ನಡೆಯುತ್ತಿದ್ದು, ಭಾನುವಾರ ಸಂಜೆ 5 ರ ವೇಳೆಗೆ ಸ್ಪರ್ಧೆಯಲ್ಲಿರುವ ಜಿಲ್ಲೆಯ ಹಾಲಿ ಶಾಸಕರಿಬ್ಬರ ಫಲಿತಾಂಶ ಪ್ರಕಟವಾಗಲಿದೆ. ಭಾನುವಾರ ಚುನಾವಣೆ ನಡೆಯುತ್ತಿದ್ದ ಡಿಸಿಸಿ ಬ್ಯಾಂಕ್ ಕಚೇರಿ 100 ಮೀಟರ್ ದೂರದಲ್ಲಿ ಗೆಲುವಿನ ನೀರಿಕ್ಷೆಯಲ್ಲಿದ್ದ ಅಭ್ಯರ್ಥಿ ಪಾವಗಡ ಶಾಸಕ ವೆಂಕಟೇಶ್ ಹಾಗೂ ತಿಪಟೂರಿನ ಷಡಕ್ಷರಿ ಅವರುಗಳು ತಮ್ಮ ಬೆಂಬಲಿಗರೊಂದಿಗೆ ಹಾಜರಿದ್ದರು. ಈ ವೇಳೆ ಅವಿರೋಧವಾಗಿ ಆಯ್ಕೆಯಾಗಿರುವ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಸ್ಥಳದಲ್ಲಿ ಇದ್ದು ತಮ್ಮ ಅಭ್ಯರ್ಥಿಗಳ ಫಲಿತಾಂಶ ಎದುರು ನೋಡುತ್ತಿದ್ದರು.