ಕಲಬುರಗಿ : ಮಚ್ಚಿನಿಂದ ಕೊಚ್ಚಿ ಯುವಕನೋರ್ವನನ್ನ ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ಕಲಬುರಗಿ ನಗರದ ಹೀರಾಪುರ ಬಡಾವಣೆಯಲ್ಲಿ ನಡೆದಿದ್ದು, ಆ25 ರಂದು ಬೆಳಗ್ಗೆ 10 ಗಂಟೆಗೆ ಪೊಲೀಸರು ಮಾಹಿತಿ ನೀಡಿದ್ದಾರೆ.. ಕಲಬುರಗಿ ತಾಲೂಕಿನ ಮೈನಾಳ ಗ್ರಾಮದ ಮರೆಪ್ಪ ಕಟ್ಟಿಮನಿ(24) ಕೊಲೆಯಾದ ಯುವಕನಾಗಿದ್ದಾನೆ. ಇನ್ನೂ ಗೌಂಡಿ ಹಾಗೂ ಡ್ರೈವರ್ ಕೆಲಸ ಮಾಡ್ತಿದ್ದ ಮರೆಪ್ಪನನ್ನ ಹೀರಾಪುರ ಬಳಿ ಬರ್ಬರವಾಗಿ ಕೊಲೆಗೈಯಲಾಗಿದೆ. ಸ್ಥಳಕ್ಕೆ ಅಶೋಕ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.