ನಿನ್ನೆ ರಕ್ತ ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ಕಾಫಿ ನಾಡು ಚಿಕ್ಕ ಮಗಳು ಜಿಲ್ಲೆಯಲ್ಲಿರುವ ಪ್ರಮುಖ ಶಕ್ತಿ ಪೀಠಗಳಲ್ಲಿ ಇಂದು ಸ್ವಚ್ಛತಾ ಕಾರ್ಯ ನೆರವೇರಿತು. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ, ಕಳಸೇಶ್ವರ ದೇವಾಲಯ ಹಾಗೂ ಶೃಂಗೇರಿಯ ಶಾರದಾ ಪೀಠಗಳಲ್ಲಿಯೂ ಕೂಡ ಸ್ವಚ್ಛತಾ ಕಾರ್ಯಗಳು ನಡೆದವು. ತಡರಾತ್ರಿ ರಕ್ತ ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ನಿರಂತರವಾಗಿ ಜಲಾಭಿಷೇಕ ನಡೆದಿತ್ತು.