ಹೊಳೆನರಸೀಪುರ: ಬೀರು ಹೊಡೆದು 4.50 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳವು ಮಾಡಿರುವ ಪ್ರಕರಣ ನಡೆದಿದೆ.ತಾಲೂಕಿನ ವಲ್ಲಂಬಿಗೆ ಗ್ರಾಮದ ವಾಸಿ ಜಯಲಕ್ಷ್ಮೀ ಎಂಬುವವರಿಗೆ ಸೇರಿದ ಮನೆಯಲ್ಲಿ ಕಳವು ನಡೆದಿದ್ದು ಮಗಳ ಮದುವೆಗಾಗಿ ಬೆಳಗ್ಗೆ 6ಗಂಟೆ ಸಮಯದಲ್ಲಿ ಮನೆಗೆ ಬೀಗ ಹಾಕಿಕೊಂಡು ತೆರಳಿದ್ದು ಸಂಜೆ ಬಂದು ನೋಡುವಷ್ಟರಲ್ಲಿ ಮನೆ ಯ ಬೀರು ಹೊಡೆದಿರುವುದು ಕಂಡು ಬಂದಿದೆ. ಮದುವೆಗೆ ಮಾಡಿಸಿಟ್ಟಿದ್ದ ಸುಮಾರು 10 ಗ್ರಾಮ ತೂಕದ ಚಿನ್ನದ ಓಲೆ, 30 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ, 15 ಗ್ರಾಂ ತೂಕದ ಚಿನ್ನದ ನೆಕ್ಲಸ್, 10ಗ್ರಾಂ ತೂಕದ ಚಿನ್ನದ ಉಂಗುರ ಒಟ್ಟು 4.,50,000 ಮೌಲ್ಯದ ಚನ್ನಾಭರಣ ಸೇರಿದಂತೆ 70 ಸಾವಿರ ನಗದನ್ನು ಕಳವು ಮಾಡಲಾಗಿದೆ.ಹೊಳೆನರಸೀಪುರ ಗ್ರಾಮಾಂತರ ಠಾಣೆ