ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನಲ್ಲಿ ಹಲವು ದಿನಗಳಿಂದ ಸುರಿತ್ತಿರುವ ಭಾರಿ ಮಳೆಗೆ ಮಳೆಯಿಂದ ಬೆಳೆ ಹಾನಿಯಾದ ಮಾಳನೂರು, ಕೋಳಿಹಾಳ, ಅರಿಕೇರಾ ಜೆ, ಗ್ರಾಮದ ಜಮೀನುಗಳಿಗೆ ತಾಲೂಕು ದಂಡಾಧಿಕಾರಿ ಬಸವರಾಜ ಹಾಗು ಕೃಷಿ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ರೈತರ ಜಮೀನುಗಳಿಗೆ ಭೇಟಿ ನೀಡಿ ರೈತರು ಬಿತ್ತನೆ ಮಾಡಿದ ಹತ್ತಿ ಬೆಳೆಗಳು ಸಂಪೂರ್ಣವಾಗಿ ಮಳೆಯಿಂದಾಗಿ ಕೊಚ್ಚಿಹೋಗಿತ್ತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಆದಷ್ಟು ಬೇಗ ರೈತರಿಗೆ ಬೆಳೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ