ಆಸ್ತಿ ವಿವಾದ ವ್ಯಕ್ತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆನಡೆದಿದೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಗ್ರಾಮದ ಗ್ರಾಮಸ್ಥರಾದ ಚನ್ನಪ್ಪ ಮಸಬಿನಾಳ ಹಾಗೂ ಶ್ರೀದೇವಿ ಮಸಬಿನಾಳ ತಮ್ಮ ಕುಟುಂಬಸ್ಥರ ಮೇಲೆ ಆಸ್ತಿ ವಿವಾದದ ಹಿನ್ನಲೆ ಹಲ್ಲೆ ಮಾಡಿದ್ದಾರೆ ಎಂದು ಮಂಗಳವಾರ ಸಾಯಂಕಾಲ 5ಗಂಟೆ ಸುಮಾರಿಗೆ ಆರೋಪಿಸಿದರು. ರಾಜಕೀಯ ಬೆಂಬಲ ಹಣದಿಂದ ನಮ್ಮ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ದಂಪತಿಗಳು ಕಣ್ಣೀರು ಹಾಕಿದರು.ನಮಗೆ ಸರ್ಕಾರ ನ್ಯಾಯ ಒದಗಿಸಬೇಕು ಇಲ್ಲದೆ ಹೋದರೆ ಕುಟುಂಬ ಸಮೇತವಾಗಿ ನಾವು ಜಿಲ್ಲಾಧಿಕಾರಿ ಕಚೇರಿ ಎದುರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನ್ಯಾಯಕ್ಕಾಗಿ ಆಗ್ರಹಿಸಿದರು.