ನಗರದಲ್ಲಿ ಬುಧವಾರ ಮಾದ್ಯಮಗಳಿಗೆ ಪ್ರತಿಕ್ರಯಿಸಿದ ಅವರು ಸಂತೋಷ್ ಲಾಡ್ ರವರು ರಾಜ್ಯ ಕಂಡಂತಹ ಉತ್ತಮ ಮಂತ್ರಿ ಹಾಗೂ ಸಮಾಜ ಸೇವಕರು ಸದಾಕಾಲ ಜನರ ಬಗ್ಗೆ ಜನರ ಒಳಿತಿಗಾಗಿ ದುಡಿಯುವಂತಹ ನಾಯಕರು. ಈ ಪ್ರಪಂಚದಲ್ಲಿ ಎಲ್ಲೇ ದುರಂತವಾದರೂ ಸಹ ಅಂತಹ ಸಹಾಯ ಮಾಡಲು ಪ್ರತ್ಯಕ್ಷ ಆಗುವುದು ಸಂತೋಷ್ ಲಾಡ್ ರವರು, ಉದಾಹರಣೆ ಕಾಶ್ಮೀರದಲ್ಲಿ ಉಗ್ರಗಾಮಿಗಳು ದಾಳಿ ನಡೆಸಿದಾಗ, ಹಾಗೂ ಎಲ್ಲೇ ಭೂಕಂಪವಾದರೂ ನಮ್ಮ ಕನ್ನಡಿಗರು ಪ್ರಪಂಚದಲ್ಲಿ ಎಲ್ಲೇ ಸಿಲುಕಿದರೂ ಸಹಾಯ ಮಾಡುತ್ತಾರೆ. ಇದರಿಂದ ಕರ್ನಾಟಕದ ಗೌರವವನ್ನು ನಮ್ಮ ಭಾರತದ ಗೌರವವನ್ನು ಉಳಿಸುವಂತಹ ಏಕೈಕ ಮಂತ್ರಿಯಾಗಿದ್ದಾರೆ ಎಂದರು. ಇಂತಹ ಮಂತ್ರಿ ನಮ್ಮ ಕಾರ್ಮಿಕ ಇಲಾಖೆಗೆ ಸಿಕ್ಕಿರುವುದು ಸಂತೋಷವಾಗಿದೆ ಎಂದ್ರು