ಕುಂದಾಪುರದ ಮೂಡ್ಲಕಟ್ಟೆಯ ರೈಲು ನಿಲ್ದಾಣಕ್ಕೆ ಕೇಂದ್ರ ರೈಲ್ವೆ ಸಚಿವ ವಿ ಸೋಮಣ್ಣ ಭೇಟಿ ನೀಡಿ, ಹಂಗಳೂರು ಲಯನ್ಸ್ ಕ್ಲಬ್ ವತಿಯಿಂದ ನವೀಕರಿಸಲಾದ ಕಾಮಗಾರಿ ಗಳನ್ನು ವೀಕ್ಷಿಸಿ, ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಕೊಂಕಣ ರೈಲ್ವೆ ವಿಲೀನ ಬಗ್ಗೆ ಮಂಗಳೂರಿನಲ್ಲಿಯೇ ಮೊದಲ ಸಭೆ ನಡೆಸಿದ್ದು, ಆದಷ್ಟು ಬೇಗ ನಿಮಗೆ ಒಳ್ಳೆಯ ಫಲಿತಾಂಶ ಕೊಡಲಾಗುವುದು. ರಾಮೇಶ್ವರ, ಅಯೋಧ್ಯೆ ರೈಲು ಆರಂಭಿಸುವುದು ಸಹಿತ ಈ ಭಾಗದ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಆದ್ಯತೆ ಮೇರೆಗೆ ಕ್ರಮವಹಿಸಲಾಗುವುದು. ಕರಾವಳಿಗೆ ನನ್ನ ಮೊದಲ ಆದ್ಯತೆಯಿದೆ ಎಂದು ಹೇಳಿದ್ದಾರೆ.