ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಯು ನಿಸಾರ್ ಅಹಮದ್ ಅವರು ರಾಯಚೂರು ನಗರದಲ್ಲಿ ಸೆಪ್ಟೆಂಬರ್ 11ರ ಗುರುವಾರ ಬೆಳಗ್ಗೆ ಪ್ರವಾಸ ಕೈಗೊಂಡರು. ರಾಯಚೂರು ನಗರದಲ್ಲಿರುವ ಅಲ್ಪಸಂಖ್ಯಾತರ ವಸತಿ ನಿಲಯಗಳು, ಸರಕಾರಿ ಉರ್ದು ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆಗೆ ಅವರು ಮಾತುಕತೆ ನಡೆಸಿದರು. ನಂತರ ಮುಸ್ಲಿಂ ಸಮುದಾಯದವರು ವಾಸದಲ್ಲಿರುವ ಕಾಲೋನಿಗಳಿಗೆ ಅವರು ಭೇಟಿ ನೀಡಿ ಅಲ್ಲಿನ ಕುಂದು ಕೊರತೆಗಳನ್ನು ಸಾರ್ವಜನಿಕರಿಂದ ಆಲಿಸಿದರು. ನಂತರ ಅಲ್ಲಿನ ಅಭಿವೃದ್ಧಿ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.