ಕೊಪ್ಪಳ ನಗರದ ಮಿಟ್ಟಿಕೇರಿ ಬಡಾವಣೆಯ ನಿವಾಸಿಯಾದ ರುಬಿಯಾ ಬಾನು ಗಂಡ ಸಾಧಿಕ್ ಅಲಿ ಅಳವಂಡಿ ಇವರ ಮಗನಾದ ಮೊಹಮ್ಮದ್ ಅರ್ಮಾನ್ ಅಲಿ ಕಾಣೆಯಾಗಿದ್ದು ಪತ್ತೆ ಹಚ್ಚಲು ಆಗ್ರಹಿಸಿ ಕರೀಮ್ ಪಾಷಾ ಎಂ.ಗಚ್ಚಿನ ಮನಿ ಅವರ ನೇತೃತ್ವದಲ್ಲಿ ಬುಧವಾರ ಮಧ್ಯಾಹ್ನ 3-30 ಗಂಟೆಗೆ ವಿವಿಧ ಸಂಘಟನೆಗಳಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ:ರಾಮ್ ಎಲ್.ಅರಸಿದ್ದಿ ಅವರಿಗೆ ಮನವಿ ಸಲ್ಲಿಸಿದರು. ಮೊಹಮ್ಮದ್ ಅರ್ಮಾನ್ ಅಲಿ 04 ವರ್ಷದ ಬಾಲಕ ದಿನಾಂಕ, 02-09-2025 ರಂದು ಕಾಣೆಯಾಗಿರುವ ಕಾರಣ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು. ಎಂಟು ದಿವಸ ಕಳೆದರೂ ಇಲ್ಲಿಯವರೆಗೆ ಪತ್ತೆ ಆಗದೆ ಇರುವ ಕಾರಣ ದಿನನಿತ್ಯ ಕೂಲಿ ಕೆಲಸ ಮಾಡಿ ಕುಟುಂಬದ ನಿರ್ವಹಣೆ ಮಾಡುತ್ತಿರುವ ಬಡ ಕುಟುಂಬದ ಮಗನ ಪತ್ತೆಗ