ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಇಳಿಕೆಯಾದ ಹಿನ್ನೆಲೆಯಲ್ಲಿ, ಡ್ಯಾಂನಿಂದ ನದಿಗೆ ಹೊರ ಹರಿವು ಸಹ ಇಳಿಕೆಯಾಗಿದೆ. ಇದರಿಂದಾಗಿ ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆಯ ಮೇಲೆ ಹರಿದು ಬಂದಿದ್ದ ನೀರು ಸ್ವಲ್ಪ ಮಟ್ಟಿಗೆ ಕೆಳಗೆ ಇಳಿದಿರುವುದು ಆಗಸ್ಟ್ 21, ಗುರುವಾರ,ಸಂಜೆ 5 ಗಂಟೆಗೆ ಗಮನಿಸಲಾಯಿತು. ಡ್ಯಾಂ ನಿಂದ ಸದ್ಯ 93 ಸಾವಿರ ಕ್ಯುಸೆಕ್ಸ್ ನೀರು ನದಿಗೆ ಬಿಡಲಾಗಿದೆ. ನದಿಯ ನೀರಿನ ಮಟ್ಟ ಕಡಿಮೆಯಾಗುತ್ತಿದ್ದಂತೆ ಸೇತುವೆ ಭಾಗದಲ್ಲಿ ಸಂಚಾರ ಸ್ಥಗಿತದಿಂದ ತಾತ್ಕಾಲಿಕವಾಗಿ ವಿನಾಯಿತಿ ದೊರಕುವ ಸಾಧ್ಯತೆ ವ್ಯಕ್ತವಾಗಿದೆ. ಆದಾಗ್ಯೂ, ಜಲಾಶಯದ ಒಳಹರಿವು ಹಾಗೂ ಹೊರ ಹರಿವು ಸ್ಥಿತಿಗತಿಗ