ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೇಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಯುವಕ ಅಭಿಲಾಷ್ (25) ಸಾವನ್ನಪ್ಪಿದ ಘಟನೆ ಕುರಿತು ಡಾ. ಪ್ರವೀಣ್ ಮತ್ತು ನರ್ಸ್ ತ್ರಿವೇಣಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತಕ್ಷಣವೇ ಅಮಾನತು ಮಾಡುವಂತೆ ಆಗ್ರಹಿಸಿ ಕೆಆರ್‌ಎಸ್ ಪಕ್ಷದ ಸದಸ್ಯರು ಹಾಗೂ ಸಮಾಜಿಕ ಹೋರಾ ಟಗಾರ ಪ್ರಖ್ಯಾತ್ ಗೌಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಜಂಬೂರು ಗ್ರಾಮದ ಅಭಿಲಾಷ್ ಸೆ.9 ರಂದು ಹೊಟ್ಟೆನೋವಿನಿಂದ ಆಸ್ಪತ್ರೆಗೆ ದಾಖಲಾದಾಗ, ಮುಖ್ಯ ವೈದ್ಯಾಧಿಕಾರಿ ಡಾ. ಪ್ರವೀಣ್ ಮತ್ತು ನರ್ಸ್ ತ್ರಿವೇಣಿ ಸೂಕ್ತ ಚಿಕಿತ್ಸೆ ಕೊಡದೆ, ಅಜಾಗರೂಕತೆಯಿಂದ ಚುಚ್ಚುಮದ್ದು ನೀಡಿದ್ದು,