ಧಾರವಾಡ ನಗರದಾದ್ಯಂತ ಭಾನುವಾರ ನಡೆದ ಸಾರ್ವಜನಿಕ ಗಣಪತಿ ಮೂರ್ತಿಗಳ ವಿಸರ್ಜನಾ ಮೆರವಣಿಗೆಯಲ್ಲಿ ಜನರು ಸಂಭ್ರಮದಿಂದ ಭಾಗವಹಿಸಿ ಗಣೇಶನಿಗೆ ಭಕ್ತಿಪೂರ್ವಕ ವಿದಾಯ ಕೋರಿದರು. ಕಮಲಾಪುರ, ಮಾಳಾಪುರ, ಎತ್ತಿನಗುಡ್ಡ, ಕಲ್ಯಾಣ ನಗರ, ಎಂ. ಆರ್. ನಗರ, ಕುಮಾರೇಶ್ವರ ನಗರ, ನವಲೂರು, ಮದಿಹಾಳದ ತೋಟಗೇರಿ ಓಣಿ, ಮರಾಠಾ ಕಾಲೋನಿ, ಕೆಲಗೇರಿ, ಸಪ್ತಾಪುರ ಸೇರಿದಂತೆ ವಿವಿಧ ಪ್ರದೇಶಗಳ ಸಾರ್ವಜನಿಕ ಗಣಪತಿ ಮೂರ್ತಿಗಳ ಮೆರವಣಿಗೆಯು ಅದ್ದೂರಿಯಾಗಿ ನಡೆಯಿತು.