ವನ್ಯಜೀವಿಗಳು ತಮ್ಮ ಜಮೀನಿಗೆ ಬರದಂತೆ ವ್ಯಕ್ತಿಯೋರ್ವ ಸೋಲಾರ್ ಬೇಲಿ ಜೊತೆ ಬ್ಲೇಡ್ ಸರಪಳಿ ಮಾದರಿ ಫೆನ್ಸಿಂಗ್ ಅಳವಡಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಮಂಗಲ ಗ್ರಾಮದ ಹುಲಿಗೆಮ್ಮ ದೇವಾಲಯದ ಸಮೀಪದ ಜಮೀನಿನಲ್ಲಿ ನಡೆದಿದೆ. ಅಂತಾರಾಷ್ಟ್ರೀಯ ಗಡಿ ಸೇರಿದಂತೆ ತೀವ್ರ ಕಟ್ಟೆಚ್ಚರ ವಹಿಸುವ ಪ್ರದೇಶದಲ್ಲಿ ಅಳವಡಿಸುವ ಬ್ಲೇಡ್ ಫೆನ್ಸ್ ನ್ನು ಅಳವಡಿಸಿದ್ದು ಪ್ರಾಣಿಗಳು ಈತನ ಜಮೀನಿಗೆ ಬರುವ ಪ್ರಯತ್ನ ಮಾಡಿದರೇ ಜೀವಕ್ಕೆ ಕುತ್ತು ತರುವ ಅಪಾಯಕಾರಿ ಬೇಲಿ ಇದಾಗಿದೆ. ಬ್ಲೇಡ್ ಫೆನ್ಸ್ ವೀಡಿಯೋವನ್ನು ಪರಿಸರವಾದಿ ಜೋಸೆಫ್ ಹೂವರ್ ಹಂಚಿಕೊಂಡು ಆಕ್ರೋಶ ಹೊರಹಾಕಿದ್ದು ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಕಿಡಿಕಾರಿದ್ದಾರೆ. ಕೇಂದ್ರ ಅರಣ್ಯ ಸಚಿವರು ಈ ಬಗ್ಗೆ ಗಂಭೀರವಾದ ಕ್ರಮ ಕೈಗೊಳ್ಳಬೇಕೆಂದಿದ್ದಾರೆ.