ಕೆ ಆರ್ ಪೇಟೆ ತಾಲ್ಲೂಕಿನ ಶ್ರಾವಣಬೆಳಗೋಳ ರಸ್ತೆಯ ತೇಗನಹಳ್ಳಿ ಗೇಟ್ ಬಳಿ ಕಾರು ಮತ್ತು ಬೈಕ್ನಡುವೆ ಡಿಕ್ಕಿ ಸಂಭವಿಸಿ ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜರುಗಿದೆ. ಬೈಕ್ನ ಹಿಂಬದಿಯಲ್ಲಿದ್ದ ಮಂಡ್ಯ ಮೂಲದ ರಾಮಣ್ಣ ಸಾವನ್ನಪ್ಪಿದ ದುದರ್ೈವಿ ವ್ಯಕ್ತಿಯಾಗಿದ್ದಾರೆ. ಬೈಕ್ ಚಾಲಕ ಕುಮಾರ್ ಅವರಿಗೆ ಗಂಭೀರವಾಗಿ ಗಾಯಗೊಂಡು ಕೆಆರ್ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸ್ಥಳಿಯರು ದಾಖಲು ಪಡಿಸಿದ್ದಾರೆ. ಬೈಕ್ ಮತ್ತು ಕಾರು ಸಂಪೂರ್ಣ ಜಖಂಗೊಂಡಿದೆ. ಕೆ ಆರ್ ಪೇಟೆಯಿಂದ ಶ್ರಾವಣಬೆಳಗೋಳಕ್ಕೆ ಕಾರು ತೆರಳುತ್ತಿದ್ದಾಗ ಬೈಕ್ ತೇಗನಹಳ್ಳಿ ಗ್ರಾಮದಿಂದ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಹೆಚ್ಚಿನ ಮಾಹಿತಿ ಇನ್ನು ತಿಳಿದು ಬಂದಿದ್ದಲ್ಲ. ಕೆ ಆರ್ ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲಿಸಿದರು.