ಮನುಷ್ಯನು ದೈಹಿಕವಾಗಿ ಸದೃಢವಾಗಿದ್ದರೆ ಮಾನಸಿಕವಾಗಿ ಅರೋಗ್ಯವಾಗಿರುತ್ತಾನೆ. ಆದುದ್ದರಿಂದ ಮಕ್ಕಳಲ್ಲಿ ದೈಹಿಕ ಸಾಮರ್ಥ್ಯದ ಪ್ರತಿಭೆಗಳನ್ನು ಗುರುತಿಸಿ ಶಿಕ್ಷಕರು ಪ್ರೋತ್ಸಾಹಿಸುವ ಮೂಲಕ ಅಂತರಾಷ್ಟ್ರೀಯ ಮಟ್ಟಕ್ಕೂ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು. ಶಾಲೆಗಳಲ್ಲಿ ಇರುವ ಕ್ರೀಡಾ ಉಪಕರಣಗಳನ್ನು ಮಕ್ಕಳಿಗೆ ಒದಗಿಸಿ ಉತ್ತೇಜಿಸಬೇಕು. ಸರ್ಕಾರವು ಕ್ರೀಡಾಕೂಟಗಳಿಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಅನುದಾನವನ್ನು ನೀಡುತ್ತಿದೆ ಅದರ ಸಮರ್ಪಕವಾಗಿ ಬಳಕೆ ಆಗಬೇಕು. ಸೋಲು ಮತ್ತು ಗೆಲವು ಸಹಜ ಅದನ್ನು ಕ್ರೀಡಾ ಸ್ಪರ್ಧಿಗಳು ಸಮಾನವಾಗಿ ಸ್ವೀಕರಿಸಬೇಕು. ಕ್ರೀಡೆಗಳಲ್ಲಿ ತೊಡಗಿಸಿಕೊಂಡವರಿಗೆ ದೈಹಿಕ ಸಾಮರ್ಥ್ಯ ವೃದ್ಧಿಯ ಜೊತೆಗೆ ಬುದ್ಧಿ ಚುರುಕುಗೊಳ್ಳುತ್ತದೆ ಅಲ್ಲದೆ ತಮ್ಮ ದೈನಂದಿನ ಚಟುವಟಿಕೆಗಳನ್ನು ಉತ್ತಮಗೊಳಿಸುತ್ತದೆ ಆದ್