ಪ್ರಬೋಧ ಸೇವಾ ಸಮಿತಿ - ಇಂದೂ ಜ್ಞಾನ ವೇದಿಕೆ ಕೋಲಾರ ಶಾಖೆ ರವರ ಸಮ್ಮುಖದಲ್ಲಿ ಕೀಲುಕೋಟೆ ಬಡಾವಣೆಯಲ್ಲಿ ಅದ್ದೂರಿಯಾಗಿ 5ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮಹೋತ್ಸವಗಳನ್ನು ಸೋಮವಾರ ಊರಿನ ಗ್ರಾಮಸ್ಥರು ಮತ್ತು ಭಕ್ತಾದಿಗಳಿಂದ ಆಚರಿಸಲಾಯಿತು. ಬಡಾವಣೆಯ ಶ್ರೀ ಬೀರೇಶ್ವರ ಸ್ವಾಮಿ ಮನೆ ದೇವಸ್ಥಾನದ ಆವರಣದಲ್ಲಿ ದಿ:16-08-2025 ರಂದು ಶ್ರೀಕೃಷ್ಣನ ಪ್ರತಿಮೆಯನ್ನು ಕೂರಿಸಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪೂಜಾ ಕಾರ್ಯಕ್ರಮ ಮತ್ತು ಭಗವದ್ಗೀತೆ ಪಠಣೆ, ಆಧ್ಯಾತ್ಮಿಕ ನಾಟಕ ಯಾರು ದೇವರು? ಎಂಬ ನಾಟಕವನ್ನು ಏರ್ಪಡಿಸಲಾಗಿತ್ತು. 10 ನೇ ದಿನ ವೇದಿಕೆ ಕಾರ್ಯಕ್ರಗಳನ್ನು ಹಮ್ಮಿಕೊಳ್ಳಲಾಗಿದ್ದು, ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಸುಮಾರು ಮಕ್ಕಳಿಂದ ಶ್ರೀ ಕೃಷ್ಣ ರಾಧೆಯ ವೇಷ ಭೂಷಣ ಸ್ಪರ್ದೆ ಏರ್ಪಡಿಸಿತ್ತು