ಧರ್ಮಸ್ಥಳ ಕ್ಷೇತ್ರದ ಪವಿತ್ರತೆಗೆ ಕಳಂಕ ತರಲು ಪ್ರಯತ್ನಿಸುತ್ತಿರುವ ಕಿಡಿಗೇಡಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಶ್ರೀನಿವಾಸಪುರ ಪಟ್ಟಣದಲ್ಲಿ ಬಿಜೆಪಿ ಪಕ್ಷ,ವಿಶ್ವ ಹಿಂದೂ ಪರಿಷತ್, ಎಬಿವಿಪಿ ಸೇರಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.ಪಟ್ಟಣದ ಮುಳಬಾಗಿಲು ಸರ್ಕಲ್ ನಿಂದ ತಾಲ್ಲೂಕು ಕಚೇರಿಯ ತನಕ ಮೆರವಣಿಗೆ ಬಂದು ತಾಲ್ಲೂಕು ಕಚೇರಿ ಆವರಣದಲ್ಲಿರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿದರು. ಪ್ರತಿಭಟನೆ ವೇಳೆ ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ ದೇಶದಲ್ಲಿನ ಸನಾತನ ಧರ್ಮವನ್ನು ಹೆಸರನ್ನು ಕೆಡಿಸಲು ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಎಸ್‌ಐಟಿ ರಚನೆ ಮಾಡಿ ಯಾರೋ ಅನಾಮಿಕ ಹೇಳಿದ್ದನೆಲ್ಲಾ ಮಾಡಿ 15 ಕಡೆ ಅಗೆದರೂ ಏನು ಸಿಕ್ಕಿಲ್ಲ. ದೇಶದ ವಿರುದ್ದ ಯಾರೇ ಷ್ಯಂ