ಹನುರು,ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಾಲಯದ ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾದ ಶ್ರೀ ಗಣೇಶನ ಮೂರ್ತಿಯನ್ನು ಶನಿವಾರ ರಾತ್ರಿ ವಿಜೃಂಭಣೆಯ ಮೆರವಣಿಗೆಯೊಂದಿಗೆ ವಿಸರ್ಜನೆ ಮಾಡಲಾಯಿತು. ಈ ಬಡಾವಣೆಯಲ್ಲಿ ಕಳೆದ 30 ವರ್ಷಗಳಿಂದ ಗಣೇಶ ಚತುರ್ಥಿಯನ್ನು ಸಂಪ್ರದಾಯ ಬದ್ದವಾಗಿ ಮತ್ತು ವೈಭವದೊಂದಿಗೆ ಆಚರಿಸಲಾಗುತ್ತಿದ್ದು, ಈ ವರ್ಷವೂ ಕೂ ಏಕದಂತ ಗೆಳೆಯರ ಬಳಗದ ವತಿಯಿಂದ ವಿಶೇಷವಾಗಿ ಗಣೇಶನ ಪ್ರತಿಷ್ಠಾಪನೆ ನೆರವೇರಿತು. ಅಂತಿಮವಾಗಿ ಗಣೇಶ ವಿಸರ್ಜನೆ ನಿಮಿತ್ತ. ನೆಡೆದ ಮೆರವಣಿಗೆಯಲ್ಲಿ ತೆರದ ವಾಹನವನ್ನು ಬಗೆಬಗೆಯ ಪುಷ್ಪಗಳಿಂದ ಆಕರ್ಷಕವಾಗಿ ಅಲಂಕರಿಸಿ, ಅದರಲ್ಲಿ ಗಣೇಶನ ಮೂರ್ತಿಯನ್ನು ಸ್ಥಾಪಿಸಿ ಹನೂರು ಪಟ್ಟಣದ ಮಹದೇಶ್ವರ ಬೆಟ್ಟ ರಸ್ತೆ, ಬಂಡಳ್ಳಿ ರಸ್ತೆ ಹಾಗೂ ಖಾಸಗಿ ಬಸ್ ನಿಲ್ದಾಣ ಮಾರ್ಗವಾಗಿ ನಡೆಸಲಾಯಿತು.