ಯಣ್ಣಿವಡಗೇರಿ ಗ್ರಾಮದಲ್ಲಿ ಗಜಾನನೋತ್ಸವ ಅಂಗವಾಗಿ ಎತ್ತಿನ ತೆರಬಂಡಿ ಸ್ಪರ್ಧೆ ಜರುಗಿತು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಯಣ್ಣಿವಡಗೇರಿ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಗಜಾನನೋತ್ಸವ ಅಂಗವಾಗಿ ಎತ್ತಿನ ತೆರಬಂಡಿ ಸ್ಪರ್ಧೆಗೆ ಪೂಜ್ಯರು ಹಾಗೂ ಮುಖಂಡರು ಚಾಲನೆ ನೀಡಿದರು. ನಂತರ ವಿವಿಧ ಜಿಲ್ಲೆ ಹಾಗೂ ತಾಲೂಕಿನ ಗ್ರಾಮೀಣ ಭಾಗದ ಎತ್ತಿನ ತೆರಬಂಡಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು ಸ್ಪರ್ಧೆ ನೋಡಲು ವಿವಿಧ ಗ್ರಾಮೀಣ ಭಾಗದ ಸಾವಿರಾರು ಜನ ಅಭಿಮಾನಿಗಳು ಭಾಗವಹಿಸಿದ್ದರು. ಎತ್ತುಗಳ ಓಟ ಕಂಡು ಕುಣಿದು ಕುಪ್ಪಳಿಸಿದರು.