ಲಕ್ಕುಂಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿ ಎತ್ತು ಸಾವನ್ನಪ್ಪಿದೆ. ಕೊಪ್ಪಳ ಕಡೆಗೆ ಹೊರಟಿದ್ದ ಸಿಮೆಂಟ ಲಾರಿ ಲಕ್ಕುಂಡಿಯ ಜಮೀನಿನಲ್ಲಿ ಕೃಷಿ ಚಟುವಟಿಕೆ ಮುಗಿಸಿಕೊಂಡು ಊರಿಗೆ ಮರಳುತ್ತಿದ್ದ ಎತ್ತಿನ ಚಕ್ಕಡಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಎತ್ತು ಸ್ಥಳದಲ್ಲಿ ಮೃತಪಟ್ಟಿದ್ದು, ರೈತ ಅಶೋಕ ಫಕೀರಪ್ಪ ಹಿರೇಹಾಳ ಅವರಿಗೆ ಗಾಯವಾಗಿದೆ. ರೈತನನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.