ಈದ್ ಮಿಲಾದ್ ಹಬ್ಬದ ಅಂಗವಾಗಿ ಇಂದು ನಗರದಲ್ಲಿ ಮಿಲಾದ್ ಕಮಿಟಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಜುಲುಸ್ ಎ ಮಹಮ್ಮದಿ(ಮೆರವಣಿಗೆ)ಹಮ್ಮಿಕೊಳ್ಳಲಾಗಿತ್ತು.ಜುಲುಸ್ ಎ ಮಹಮ್ಮದಿ ಮುಖಾಂತರ ಇಸ್ಲಾಂ ಧರ್ಮದ ಆಶಯಗಳಾದ ಸೌಹಾರ್ದತೆ, ದಯೆ,ಒಗ್ಗಟ್ಟು,ಪ್ರೀತಿ,ಬದ್ಧತೆ ಬಗ್ಗೆ ಜನರಲ್ಲಿ ಸಂದೇಶ ರವಾನಿಸಲಾಯಿತು,ನಗರದ ಟೌನ್ ಹಾಲ್ ಸರ್ಕಲ್ ವತಿಯಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಎಂ ಜಿ ರಸ್ತೆ ಮೂಲಕ ಪ್ರಶಾಂತ ನಗರದಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿತು.ಅಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.