ಕಲಬುರಗಿ : ಕಲಬುರಗಿ ಜಿಲ್ಲೆ ಸೇರಿದಂತೆ ನೆರೆ ರಾಜ್ಯಗಳಲ್ಲಿ ಧಾರಕಾರ ಮಳೆಯಾಗ್ತಿರೋದ್ರಿಂದ ಜಿಲ್ಲೆಯ ಹೇರೂರ(ಕೆ) ಗ್ರಾಮದ ಬಳಿಯಿರೋ ಬೆಣ್ಣೆತೋರ ಜಲಾಶಯ ಮೈದುಂಬಿ ಹರಿಯುತ್ತಿದ್ದು, ಜಲಾಶಯದ ವೈಭವನ್ನ ಡ್ರೋಣ್ ಕ್ಯಾಮರದಲ್ಲಿ ಸೆರೆ ಹಿಡಿಯಲಾಗಿದೆ.. ಹೇರೂರ(ಕೆ) ಗ್ರಾಮದ ಪ್ರವೀಣ್ ಹೇರೂರ ಎಂಬುವರು ಆ24 ರಂದು ಮಧ್ಯಾನ 2 ಗಂಟೆಗೆ ತಮ್ಮ ಡ್ರೋಣ್ ಕ್ಯಾಮರದಲ್ಲಿ ಬೆಣ್ಣೆತೋರ ಜಲಾಶಯದ ವೈಭವ ಸೆರೆ ಹಿಡಿದಿದ್ದಾರೆ.. ಇನ್ನೂ ಬೆಣ್ಣೆತೋರ ಜಲಾಶಯ ಮೈದುಂಬಿ ಹರಿಯುತ್ತಿರುವುದು, ಜಲಾಶಯದ ಸೇತುವೆ, ಸುತ್ತಮುತ್ತಲಿನ ಪರಿಸರವು ಡ್ರೋಣ್ ಕ್ಯಾಮರದಲ್ಲಿ ಸೆರೆಹಿಡಿಯಲಾಗಿದ್ದು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.