ಸ್ನೇಹಿತನಿಗೆ ಕಂಠಪೂರ್ತಿ ಕುಡಿಸಿ ರಾಬರಿ ಮಾಡಿಸಿದ ಸ್ನೇಹಿತರು. ಕಂಠಪೂರ್ತಿ ಕುಡಿಸಿ ಚಿನ್ನದ ಚೈನ್,ಕೈ ಕಡಗ ರಾಬರಿ. ರಾಬರಿ ಮಾಡಿಸಿ ತಾವೇ ಸ್ಟೇಷನ್ ಗೆ ತೆರಳಿ ದೂರು ಕೊಡಿಸಿದ್ದ ಸ್ನೇಹಿತರು. ಸ್ನೇಹಿತರ ವರ್ತನೆಯಿಂದ ಅನುಮಾನಗೊಂಡಿದ್ದ ಪೊಲೀಸರು. ಕಾಲ್ ಲೀಸ್ಟ್ ತೆಗೆದಾಗ ಎಲ್ಲರು ಸಿಕ್ಕಿಬಿದ್ದಿದ್ದಾರೆ. ಹೌದು..ಈ ಘಟನೆ ಬೆಂಗಳೂರಿನ ಚಿಕ್ಕಜಾಲದಲ್ಲಿ ಕಳೆದು ತಿಂಗಳು ನಡೆದಿದ್ದು, ಚಿಕ್ಕಜಾಲ ಪೊಲೀಸರು ಭಾನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ರಾಬರಿಗೊಳಗಾದ ಚಂದನ್ ಹಾಗೂ ಪವನ್ ಅಚಲ್ ಮೂವರು ಸ್ನೇಹಿತರು, ಚಂದನ್ ಅವರ ಪೋಷಕರಿಗೆ ಒಬ್ಬನೆ ಮಗ, ಮೈಕೈ ತುಂಬಾ ಚಿನ್ನಾಭರಣ ಹಾಕಿಕೊಂಡೇ ಓಡಾಡ್ತಿದ್ದ.