ಗೌರಿ ಗಣೇಶ ಹಬ್ಬ ಹಿನ್ನೆಲೆ ನಗರದ ವಿವಿಧ ಕಡೆಗಳಲ್ಲಿ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರು ನಡೆದಿರುವುದು ಕಂಡುಬಂದಿತು. ಹೂವು, ಹಣ್ಣು, ಬಾಳೆ ಕಂಬ, ಅಲಂಕಾರಿಕ ವಸ್ತುಗಳು, ವಿದ್ಯುತ್ ದೀಪಾಲಂಕಾರ ಸಾಮಗ್ರಿ ಸೇರಿದಂತೆ ಅನೇಕ ವಸ್ತುಗಳನ್ನು ಖರೀದಿ ಮಾಡುತ್ತಿರುವುದು ಕಂಡುಬಂತು. ಸಾಮಾನ್ಯವಾಗಿ ಬೆಲೆ ಏರಿಕೆ ಆದರೂ ಕೂಡ ವ್ಯಾಪಾರಸ್ಥರ ಬಳಿ ಗ್ರಾಹಕರು ಚೌಕಾಸಿ ಮಾಡುತ್ತಾ ಖರೀದಿ ಭರಾಟೆಯಲ್ಲಿ ತೊಡಗಿದ್ದರು.