ಸಾಗರ ತಾಲೂಕಿನ ಕರೂರು ಹೋಬಳಿಯಿಂದ ಕಾರ್ಗಲ್ ಜೋಗಕ್ಕೆ ಸಂಪರ್ಕಿಸುವ ಹಲ್ಕೆ ಮುಪ್ಪಾನೆ ಕಡಬು ಮಾರ್ಗವು ತಾಂತ್ರಿಕ ದೋಷದ ಕಾರಣ ಭಾನುವಾರದಿಂದ ಮತ್ತೆ ಲಾಂಚ್ ಸ್ಥಗಿತಗೊಂಡು ಜನರು ಪರದಾಡುವಂಥಾಗಿದೆ ನಿರಂತರ ಮಳೆಯಿಂದಾಗಿ ಶರಾವತಿ ಹಿಂದಿರಿನಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ಸೂಕ್ತ ಪ್ಲಾಟ್ ಫಾರ್ಮ್ ಇಲ್ಲದೆ ನಾನ್ ತಾಂತ್ರಿಕ ದೋಷಕ್ಕೆ ಒಳಗಾಗಿದೆ. ಮಣ್ಣಿನ ಮೇಲೆ ಲಾಂಚ್ ನಿಲುಗಡೆ ಮಾಡುವಾಗ ಮರದ ದಿಂಬಿಗಳು ಪದೇ ಪದೇ ಲಾಂಛನ ತಳಭಾಗಕ್ಕೆ ಸಿಲುಕಿ ಲಾಂಚ್ ತಾಂತ್ರಿಕ ದೋಷಕ್ಕೆ ಒಳಗಾಗುತ್ತಿದೆ ಅಲ್ಲದೆ ಲಾಂಚ್ ನಿರ್ವಹಣೆ ತಾಂತ್ರಿಕ ತಜ್ಞರು ಇಲಾಖೆಯಲ್ಲಿ ಇಲ್ಲದಿರುವುದರಿಂದ ಸದ್ಯ ಇನ್ನ ಎರಡು ದಿನ ಲಾಂಚ್ ಸೇವೆ ಪುನರ್ ಆರಂಭ ಕಷ್ಟ ಎಂದು ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ