ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರ ನಿವಾಸಗಳ ಮೇಲೆ ಇಡಿ ದಾಳಿ ಮುಕ್ತಯವಾಗಿದೆ. ಈ ನಡುವೆ ಶಾಸಕ ವೀರೇಂದ್ರ ಪಪ್ಪಿ ಅವರನ್ನ ಸಿಕ್ಕಿಂ ನ ಗ್ಯಾಂಗ್ ಟಕ್ ಎಂಬಲ್ಲಿ ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಳಿಕ ವಿಶೇಷ ವಿಮಾನದಲ್ಲಿ ಸಿಕ್ಕಿಂದನಿಂದ ಶಾಸಕ ಪಪ್ಪಿ ಅವರನ್ನ ಬೆಂಗಳೂರಿಗೆ ಕರೆತಂದಿದ್ದಾರೆ ಈ ನಡುವೆ ಇಂದು ಶಾಸಕ ಕೆ.ಸಿ.ವೀರೇಂದ್ರ ಅವರನ್ನ ಕೋರ್ಟ್ ಮುಂದೆ ಹಾಜರ್ ಪಡಿಸಿದ್ದು, ನ್ಯಾಯಾಲಯ ಇಡಿ ಕಸ್ಟಡಿಗೆ ನೀಡಿದೆ. ಈ ನಡುವೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಅವರ ನಿವಾಸದ ಬಳಿ ಅಭಿಮಾನಿಗಳಿಲ್ಲದೇ ಮನೆ ಖಾಲಿ ಖಾಲಿ ಹೊಡೆಯುತ್ತಿದೆ. ನಿತ್ಯ ಬಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಶಾಸಕ ಮನೆ ಬಳಿ ಆಗಮಿಸುತ್ತಿದ್ದರು.