ಮಳವಳ್ಳಿ ತಾಲ್ಲೂಕಿನ ಡಿ. ಹಲಸಹಳ್ಳಿ ಗ್ರಾಮದ ನಾಗರಾಜು ಅಲಿಯಾಸ್ ರಾಮಾಚಾರಿ ಎಂಬುವರು ಕಾರ್ಯನಿಮಿತವಾಗಿ ತಮ್ಮ ಜಮೀನಿಗೆ ಹೋಗಿದ್ದ ಸಂದರ್ಭದಲ್ಲಿ ನೀಲಗಿರಿ ತೋಪಿನಲ್ಲಿ ಹೆಬ್ಬಾವು ಪ್ರತ್ಯಕ್ಷವಾಗಿರುವ ಘಟನೆ ಜರುಗಿದೆ. ಕಂಡ ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿರಿಗೆ ಮಾಹಿತಿ ನೀಡಿದ್ದು ಅವರು ಉರಗ ತಜ್ಞ ಜಗದೀಶ್ ಅವರಿಗೆ ದೂರವಾಣಿ ಮುಖಾಂತರ ವಿಷಯ ತಿಳಿಸಿದರಿಂದ ತಕ್ಷಣ ಸ್ಥಳಕ್ಕೆ ಬಂದು ಹೆಬ್ಬಾವನ್ನು ಹಿಡಿದು ಶಿಂಷಾ ಅರಣ್ಯ ಪ್ರದೇಶಕ್ಕೆ ಬಿಟ್ಟಿರುತ್ತಾರೆ. ಈ ಸಂದರ್ಭದಲ್ಲಿ ಉರಗತಜ್ಞರಾದ ಜಗದೀಶ್ ಅಲಿಯಾಸ್ ಗಿಡ್ಡಪ್ಪ ಅವರು ಬುಧವಾರ ಸಂಜೆ 4 ಗಂಟೆಯಲ್ಲಿ ಮಾತನಾಡಿ, ನಾನು ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದೇನೆ, ನಿಮಗೆ ಎಲ್ಲಾದರೂ ನಿಮ್ಮ ಜಮೀನುಗಳಲ್ಲಾಗಲಿ ಅಥವಾ ಮನೆಗಳಲ್ಲಾಗಲಿ