ಚಾಮರಾಜನಗರ:ತಾಲೂಕಿನ ಮರಿಯಾಲ ಬ್ರಿಡ್ಜ್ ಬಳಿ ಸೋಮವಾರ ಮದ್ಯಾಹ್ನ3ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಟಿವಿಎಸ್ ಎಕ್ಸೆಲ್ ವಾಹನ ಸವಾರನಿಗೆ ಗಾಯವಾಗಿರುವ ಘಟನೆ ಸಂಭವಿಸಿದೆ. ಮರಿಯಾಲ ಬ್ರಿಡ್ಜ್ ಬಳಿ ಸಂಚರಿಸುತ್ತಿದ್ದ ನೋಂದಣಿ ಸಂಖ್ಯೆಕೆಎ-45 ಎಫ್ 0034 ನಂಬರ್ ನ ಕೆಎಸ್ ಆರ್ ಟಿಸಿ ಮತ್ತು ಟಿವಿಎಸ್ ಕೆಎ-10 ಇಎಚ್ 7324 ನಡುವೆ ಡಿಕ್ಕಿ ಸಂಭವಿಸಿದ್ದು, ಎಕ್ಸೆಲ್ ಸವಾರನಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು ತಕ್ಷಣವೇ ಸ್ಥಳೀಯರು ಖಾಸಗಿ ಆಂಬುಲೆನ್ಸ್ ಮೂಲಕ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದ ಮಾಹಿತಿ ದೊರಕಿದ ತಕ್ಷಣ ಸ್ಥಳಕ್ಕೆ ಸಂಚಾರ ಠಾಣೆಯ ಪಿಎಸ್‌ಐ ಆಗಮಿಸಿ, ಪರಿಶೀಲನೆ ನಡೆಸಿ ವಾಹನಗಳ ದಟ್ಟಣೆಯನ್ನು ನಿಯಂತ್ರಿಸುವ ಮೂಲಕ ಸಂಚಾರ ವ್ಯತ್ಯಯವಾಗದಂತೆ ಕ್ರಮ ಕೈಗೊಂಡಿದ್ದಾರೆ.