2009ರಲ್ಲಿ ಕ್ಷೇತ್ರಕ್ಕೆ ಮಂಜೂರಾದ 5 ವಿದ್ಯುತ್ ಉಪ ಕೇಂದ್ರಗಳನ್ನು ತೆರೆಯಲು ರೈತರೂ ಕೇಳಿಲ್ಲ, ರಾಜಕಾರಣಿಗಳಿಗೂ ಇಚ್ಛಾ ಶಕ್ತಿಯಿಲ್ಲ. ಹಾಗಾಗಿ ಬೇರೆ ತಾಲ್ಲೂಕಿಗಾದರೂ ವರ್ಗಾಯಿಸಿ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಲೇರುದ್ರೇಶ್ ಒತ್ತಾಯಿಸಿದರು. ಶನಿವಾರ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ಪತ್ರಿಕಾಭವನದಲ್ಲಿ ಜೆಡಿಎಸ್ ಪಕ್ಷದಿಂದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ತಾಲ್ಲೂಕಿನಾದ್ಯಂತ ಕೆರೆಕಟ್ಟೆಗಳು ಭರ್ತಿಯಾಗಿವೆ. ರೈತರ ಕೃಷಿ ಬೋರ್ ವೆಲ್ ಗಳ ಪಂಪ್ ಸೆಟ್ ಗಳಿಗೆ ದಿನದಿಂದ ದಿನಕ್ಕೆ ವಿದ್ಯುಚ್ಛಕ್ತಿ ಅಭಾವ ಸೃಷ್ಠಿಯಾಗುತ್ತಿದೆ ಎಂದರು.