ಕುರುಕಲು ತಿಂಡಿ ಪ್ರಿಯರನ್ನು ನೋಡಿರುತ್ತೀರಿ, ಹೆಚ್ಚು ತಿನ್ನುವ ತಿಂಡಿಪೋತರನ್ನು ಕಂಡಿರುತ್ತೀರಿ. ಆದರೆ, ಇಲ್ಲೋರ್ವ ಹಣ್ಣಿನ ರಸದಂತೆ ವೇಸ್ಟ್ ಆಯಿಲ್ ನ್ನು ಕುಡಿದು ಎಲ್ಲರನ್ನೂ ಅಚ್ಚರಿಗೆ ಒಳಗಾಗುವಂತೆ ಮಾಡಿದ್ದಾರೆ. ಮೈಸೂರಿನ ಕುಮಾರ್ ಎಂಬ ಅಯ್ಯಪ್ಪ ಭಕ್ತ ಕೊಳ್ಳೇಗಾಲದ ಮೂಲಕ ಶಬರಿಮಲೆ ಯಾತ್ರೆಗೆ ತೆರಳುವಾಗ ಕೊಳ್ಳೇಗಾಲ ಪಟ್ಟಣದಲ್ಲಿ ವೇಸ್ಡ್ ಆಯಿಲ್ ನ್ನು ಹಣ್ಣಿನ ರಸದಂತೆ ವೇಸ್ಟ್ ಆಯಿಲ್ ಹೀರಿದರು. ಕಳೆದ 29 ವರ್ಷದಿಂದ ಇದನ್ನೇ ಕುಡಿದು ಜೀವಿಸುತ್ತಿದ್ದೇನೆ, ಊಟ-ತಿಂಡಿ ಯಾವುದೂ ಸೇರುವುದಿಲ್ಲ, ಕುಡಿದರೇ ಟೀ-ಕಾಫಿ ಹಾಗೂ ವೇಸ್ಟ್ ಆಯಿಲ್ ಅಷ್ಟೇ ಎಂದು ಗಟಗಟನೇ ವೇಸ್ಟ್ ಆಯಿಲ್ ಕುಡಿದ ಕುಮಾರ್ ನಗೆ ಬೀರಿದರು.